ಇಂಗ್ಲಿಷ್ನಲ್ಲಿ ನಿತ್ಯಜಾತಕ - ನಿಮ್ಮ ನಕ್ಷತ್ರಗಳು ಏನು ಯೋಜನೆ ರೂಪಿಸಿವೆ?
ಪ್ರತಿದಿನವೂ ಒಂದು ಹೊಸ ಆರಂಭ ಮತ್ತು ನಿತ್ಯನೂತನ ಅವಕಾಶಗಳ ಸರಮಾಲೆಯ ಅನ್ವೇಷಣೆ ಜೊತೆಗೆ ಅದು ನಮ್ಮ ಮುಂದಿರುತ್ತದೆ. ಆದರೆ, ಜೀವನ ಊಹಿಸಿದಂತೆ ಸಾಗದು ಮತ್ತು ಹಾಗೆ, ಇಂದಿನ ಜಾತಕವನ್ನು ತಿಳಿದುಕೊಳ್ಳುವುದು & ನಿಮ್ಮ ದಿನ ಹೇಗೆ ಪ್ರಗತಿ ಸಾಧಿಸಲಿದೆ ಎನ್ನುವ ಬಗ್ಗೆ ಮೊದಲೇ ತಿಳಿದಿದ್ದರೆ ನಿಮಗೆ ಲಾಭವಾಗಲಿದೆ. ಎಲ್ಲಾ ರಾಶಿಗಳಿಗೂ ನೀಡಲಾದ ನಮ್ಮ ಉಚಿತ ದಿನ ಜಾತಕನ್ನು ಓದಿ, ನಿಮಗಾಗಿ ಏನು ಕಾದಿದೆ ಎನ್ನುವುದನ್ನು ತಿಳಿಸುಕೊಳ್ಳಿ. ಎದುರಿಸಬೇಕಾಗಿ ಬರಬಹುದಾದ ಯಾವುದೇ ಅಡ್ಡಿ- ಆತಂಕಗಳಿಗೆ ಸಿದ್ಧರಾಗಿ ನಿಮ್ಮ ಅತ್ಯುತ್ತಮ ಕ್ಷಣಗಳಿಗೆ ಬೆಲೆ ಸಿಗುವಂತೆ ಮಾಡಿ.
ನಿಮ್ಮ ಉಚಿತ ವಾರದ ಜಾತಕ ವರದಿಯನ್ನು ಪಡೆದುಕೊಳ್ಳಿ
‘ಹೋರೋಸ್ಕೋಪ್ (ಜಾತಕ)’ ಎನ್ನುವ ಪದ ಎರಡು ಶಬ್ದಗಳ ಸಂಯೋಜನೆ. ಇಲ್ಲಿ ಹೋರೋ ಎಂದರೆ ಗಂಟೆ ಮತ್ತು ಸ್ಕೋಪ್ ಎಂದರೆ ನೋಟ ಎಂದರ್ಥ. ಹೀಗಾಗಿ ಹೋರೋಸ್ಕೋಪ್ ಎನ್ನುವ ಪದವು ‘ಒಂದು ಗಂಟೆಯ ವಿವರಗಳು’ ಎನ್ನುವುದನ್ನು ಸೂಚಿಸುತ್ತದೆ. ಜಾತಕದಲ್ಲಿ ಬಾಹ್ಯಾಕಾಶದ ಕಾಯಗಳಾದ ಸೂರ್ಯ, ಗ್ರಹಗಳು ಹಾಗೂ ಚಂದ್ರನ ಬಗ್ಗೆ ಅಧ್ಯಯನಕ್ಕೆ ಸಂಬಂಧಿಸಿದೆ. ಅಷ್ಟೇ ಅಲ್ಲದೆ, ಅವುಗಳ ಚಲನೆಯಿಂದ ನಿಮ್ಮ ಜೀವನದ ಮೇಲೆ ಆಗಬಹುದಾದ ಪರಿಣಾಮಗಳನ್ನೂ ವಿವರಿಸುತ್ತದೆ.
ಜಾತಕಗಳನ್ನು ನಿಮ್ಮ ಜನ್ಮ ಸಮಯವನ್ನು ಆಧರಿಸಿ ವಿನ್ಯಾಸಗೊಳಿಸಲಾಗುತ್ತದೆ. ಅವು ನಿರ್ದಿಷ್ಟ ಸ್ಥಳದಲ್ಲಿ ನಿರ್ದಿಷ್ಟ ಸಮಯಗಳಲ್ಲಿ ವಿಭಿನ್ನ ಗ್ರಹಗಳ ಸ್ಥಿತಿ ಗತಿಯನ್ನು ವ್ಯಾಖ್ಯಾನಿಸುತ್ತವೆ. ಪ್ರತೀ ವ್ಯಕ್ತಿಗೂ ಈ ವಿವರ ವಿಶಿಷ್ಟವಾಗಿರುತ್ತದೆ.ಹಿಂದೂ ಜ್ಯೋತಿಷ್ಯದ ಪ್ರಕಾರ ಪ್ರತೀ ಜಾತಕದಲ್ಲಿ 12 ಮನೆಗಳಿರುತ್ತವೆ (ಭಾವಗಳು). ನಿಮ್ಮ ಜಾತಕವನ್ನು ಸರಿಯಾಗಿ ವಿಶ್ಲೇಷಿಸಿದಲ್ಲಿ ನಿಮ್ಮಭವಿಷ್ಯದ ಬಗ್ಗೆ ತಿಳಿದುಕೊಳ್ಳುವುದು ಮಾತ್ರವಲ್ಲದೆ, ಹಿಂದಿನ ಮತ್ತು ಈಗಿನ ಆಗು ಹೋಗುಗಳನ್ನೂ ತಿಳಿದುಕೊಳ್ಳಬಹುದು. 12 ಮನೆಗಳನ್ನು ಹೊರತುಪಡಿಸಿ, ಜಾತಕ ಕುಂಡಲಿಯಲ್ಲಿ ವ್ಯಕ್ತಿಗತವಾದ ಗ್ರಹಗಳು, ರಾಶಿ ಚಿಹ್ನೆಗಳು, ಆಯಾಮಗಳು, ಚಹರೆಗಳು, ನಡೆತಗಳು, ಇಷ್ಟಾನಿಷ್ಟಗಳ ವಿವರವೂ ಇರುತ್ತದೆ.
ವ್ಯಕ್ತಿಯ ಜೀವನದ ಪ್ರಿಯವಾದ ಮತ್ತು ಅಪ್ರಿಯವಾದ ಸಮಯಗಳನ್ನು ಜಾತಕ ಓದಿ ಹೇಳಬಹುದಾಗಿದೆ. ಕುಂಡಲಿಗಳು ವೃತ್ತಿ, ಪ್ರೇಮ ಜೀವನ, ಸಂಬಂಧಗಳು, ವ್ಯಕ್ತಿಯೊಂದಿಗಿನ ರಾಶಿಯ ಹೊಂದಾಣಿಕೆ ಇತ್ಯಾದಿ ಪ್ರಶ್ನೆಗಳಿಗೆ ಉತ್ತರವನ್ನೂ ಹೊಂದಿರುತ್ತವೆ. ನಿಮ್ಮ ಕಡೆಗೆ ಹೊರಳಲಿರುವ ಅದೃಷ್ಟ, ಜೀವನದ ಹಿನ್ನಡೆ, ಮದುವೆಯಾಗಲು ಸೂಕ್ತ ಸಮಯ, ಮತ್ತು ಇನ್ನೂ ಹೆಚ್ಚಿನ ವಿವರಗಳನ್ನು ನಿಮ್ಮ ನಿತ್ಯ ಜಾತಕ/ ಜ್ಯೋತಿಷ್ಯ ಚಾರ್ಟ್ನಿಂದ ನೀವು ತಿಳಿದುಕೊಳ್ಳಬಹುದು.
ನಿಮ್ಮ ವಾರ್ಷಿಕ ಜಾತಕ ವರದಿಯನ್ನು ಡೌನ್ಲೋಡ್ ಮಾಡಿ
ಲಗ್ನ ಮತ್ತು ರಾಶಿ- ಅವು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತವೆ?
ವೈದಿಕ ಜ್ಯೋತಿಷ್ಯದ ಕಲ್ಪನೆಯ ಪ್ರಕಾರ ಎರಡೂ ಲಗ್ನ (ನಕ್ಷತ್ರ ಚಿಹ್ನೆ) ಮತ್ತು ರಾಶಿ (ರಾಶಿ ಚಿಹ್ನೆ) ನಿಮ್ಮ ಜಾತಕದಲ್ಲಿ ಅತಿ ಮುಖ್ಯ ಅಂಶಗಲಾಗಿವೆ. ಕುಂಡಲಿ ವಿವರಗಳಲ್ಲಿ ಅವುಗಳ ಬಗ್ಗೆ ಸ್ಪಷ್ಟವಾದ ವಿವರಗಳು ಇರುತ್ತವೆ. ಆದರೆ, ಪ್ರತಿಯೊಬ್ಬರಿಗೂ ಎರಡರ ನಡುವಿನ ಸ್ಪಷ್ಟ ವ್ಯತ್ಯಾಸದ ಅರಿವು ಇರುವುದಿಲ್ಲ. ಹೀಗಾಗಿ ಬಹಳಷ್ಟು ಬಾರಿ ಗೊಂದಲಕ್ಕೆ ಈಡಾಗುತ್ತಾರೆ. ಪ್ರತೀ ಚಿಹ್ನೆ ನಿಮ್ಮ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದನ್ನು ನಾವು ಅರಿತುಕೊಳ್ಳೋಣ.
ವೈದಿಕ ಜ್ಯೋತಿಷ್ಯದ ಪ್ರಕಾರ ಲಗ್ನ (ನಕ್ಷತ್ರ ಚಿಹ್ನೆ) ನಿಮ್ಮ ರಾಶಿಚಕ್ರದ ವ್ಯಕ್ತಿತ್ವವನ್ನು ನಿಯಂತ್ರಿಸುತ್ತದೆ. ನಿಮ್ಮ ಚಹರೆ, ವ್ಯಕ್ತಿತ್ವ, ನಡವಳಿಕೆ ಇತ್ಯಾದಿಗಳ ಪ್ರಮುಖ ಅಂಶಗಳನ್ನು ಪ್ರಭಾವಿಸುತ್ತದೆ. ಜೊತೆಗೆ, ವ್ಯಕ್ತಿಗತವಾಗಿ ನಿಮ್ಮ ನಂಬಿಕೆಯನ್ನು ಪ್ರತಿನಿಧಿಸುತ್ತದೆ. ನಿಮ್ಮ ಲಗ್ನ ಚಿಹ್ನೆಯನ್ನು ಕಂಡುಕೊಳ್ಳುವುದು ಸುಲಭ ಮತ್ತು ನಿಮ್ಮ ಜನ್ಮ ದಿನ ಮತ್ತು ನೀವು ಜನ್ಮ ರಾಶಿಚಕ್ರದ ತಿಂಗಳನ್ನು ತಿಳಿಯುವ ಮೂಲಕ ಅದನ್ನು ಪತ್ತೆ ಮಾಡಬಹುದು. ರಾಶಿಚಕ್ರದಲ್ಲಿ ಮೇಷ ರಾಶಿಯಿಂದ ಮೀನ ರಾಶಿಯವರೆಗೆ 12 ಚಿಹ್ನೆಗಳಿವೆ. ಮತ್ತು ಪ್ರತೀ ರಾಶಿ ಚಕ್ರವನ್ನು ಒಂದು ಗ್ರಹವು ಆಳುತ್ತದೆ. ಆ ಗ್ರಹದ ಪ್ರಭಾವವು ನಿಮ್ಮ ವ್ಯಕ್ತಿಗತವಾದ ವ್ಯಕ್ತಿತ್ವದ ಮೇಲೆ ಹೆಚ್ಚಾಗಿರುತ್ತದೆ.
ನಿಮ್ಮ ಜನನದ ಸಂದರ್ಭದಲ್ಲಿ ರಾಶಿಯ ಸ್ಥಾನ ಯಾವುದು ಎನ್ನುವುದರ ಮೇಲೆ ನಿಮ್ಮ ರಾಶಿ ನಿರ್ಧರಿಸಲಾಗುತ್ತದೆ. ಅದಕ್ಕಾಗಿ ನಿಮ್ಮ ರಾಶಿ ಯಾವುದೆಂದು ತಿಳಿಯಲು ಖಚಿತವಾಗಿ ನಿಮ್ಮ ಜನ್ಮ ಸಮಯ, ದಿನಾಂಕ ಮತ್ತು ಸ್ಥಳದ ಅಗತ್ಯವಿದೆ. ರಾಶಿ ಚಿಹ್ನೆಯು 12 ರಾಶಿಚಕ್ರಗಳ ಚಿಹ್ನೆಗಳ ಸುತ್ತ ತಿರುತ್ತದೆ ಮತ್ತು ಕನಿಷ್ಠ 2 ದಿನಗಳ ಕಾಲ ಅವುಗಳಲ್ಲಿ ಪ್ರತಿಯೊಂದರಲ್ಲೂ ನೆಲೆಯೂರುತ್ತದೆ.
ನಕ್ಷತ್ರ ಚಿಹ್ನೆಯು ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತದೆ, ರಾಶಿ ಚಿಹ್ನೆಯು ಅದಕ್ಕೆ ವಿರುದ್ಧವಾಗಿ ನಿಮ್ಮ ಮನೋಸ್ಥಿತಿ ಮತ್ತು ಭಾವನೆಗಳನ್ನು ವಿವರಿಸುತ್ತದೆ. ಉದಾಹರಣೆಗೆ, ನೀವು ಮಕರ ರಾಶಿಯವರಾಗಿದ್ದಲ್ಲಿ, ನಿಮ್ಮ ಜೀವನದಲ್ಲಿ ಹೆಚ್ಚು ಶಿಸ್ತು ಇರುತ್ತದೆ. ಹೆಚ್ಚು ಇಚ್ಛಾಶಕ್ತಿಯೂ ಇರುತ್ತದೆ. ಆದರೆ ನೀವು ಮೀನ ರಾಶಿಯವರಾದರೆ, ಯಾವುದೇ ವಿಚಾರದ ಬಗ್ಗೆ ಹುಚ್ಚು ಆಸಕ್ತಿ, ಕನಸು ಹೊಂದಿರುತ್ತೀರಿ ಮತ್ತು ಬಹಳ ಆತ್ಮಾವಲೋಕನದ ನಡವಳಿಕೆಯನ್ನು ತೋರಿಸುತ್ತೀರಿ. ಕೆಲವೊಮ್ಮೆ ವ್ಯಕ್ತಿಗಳು ನಿರ್ದಿಷ್ಟ ಚಿಹ್ನೆಯ (ಲಗ್ನ ಅಥವಾ ರಾಶಿ) ಕಡೆಗೆ ವಾಲುತ್ತಾರೆ. ಮತ್ತು ಅಂತಹ ಸಂದರ್ಭದಲ್ಲಿ ಅವರು ವಾಲಿರುವ ಬದಿಗೆ ತಕ್ಕಂತೆ, ಅವರ ನಡವಳಿಕೆಯ ಮೇಲೂ ಪ್ರಭಾವ ಬೀರಲಾರಂಭಿಸುತ್ತದೆ.
ರಾಶಿ ಮತ್ತು ಲಗ್ನದ ನಡುವಿನ ವ್ಯತ್ಯಾಸ
ಎರಡೂ ನಕ್ಷತ್ರ ಚಿಹ್ನೆಗಳು ಮತ್ತು ರಾಶಿ ಚಿಹ್ನೆಗಳು ರಾಶಿ ಚಕ್ರದ ಚಿಹ್ನೆಗಳನ್ನೇ ಅನುಸರಿಸುತ್ತವೆ ಮತ್ತು ನಿಮ್ಮ ಜನ್ಮ ದಿನ, ಸಮಯ ಮತ್ತು ಸ್ಥಳದ ಅಗತ್ಯವಿದೆ. ಅವುಗಳನ್ನು ಭಿನ್ನವಾಗಿಸುವ ಒಂದು ವಿಚಾರವೆಂದರೆ ರಾಶಿ ಚಿಹ್ನೆಗೆ ವರ್ಷ, ತಿಂಗಳು, ದಿನ, ಸಮಯ ಮತ್ತು ಸ್ಥಳ ಹೆಚ್ಚು ನಿಖರವಾಗಿರಬೇಕಾಗುತ್ತದೆ. ನಕ್ಷತ್ರ 12 ತಿಂಗಳಲ್ಲಿ ಎಲ್ಲಾ 12 ರಾಶಿ ಚಕ್ರದ ಚಿಹ್ನೆಗಳ ಸುತ್ತ ತಿರುಗುತ್ತದೆ. ಅಂದರೆ ಅದು ಪ್ರತೀ ತಿಂಗಳು ಅವುಗಳಲ್ಲಿ ಒಂದೊಂದು ರಾಶಿಯಲ್ಲಿ ನೆಲೆಸುತ್ತದೆ. ಮತ್ತೊಂದೆಡೆ ರಾಶಿಯು ಎರಡು ಮತ್ತು ಅರ್ಧ ದಿನಗಳಿಗಷ್ಟೇ ಒಂದು ನಿರ್ದಿಷ್ಟ ಚಿಹ್ನೆಯಲ್ಲಿ ಉಳಿದುಕೊಳ್ಳುತ್ತದೆ. ಹೀಗಾಗಿ, ನಿಮ್ಮ ರಾಶಿ ಚಿಹ್ನೆಯನ್ನು (ರಾಶಿ) ಲೆಕ್ಕ ಹಾಕಲು ನಿಮಗೆ ಜನ್ಮ ಸಮಯ ಮತ್ತು ಸ್ಥಳ ನಿಖರವಾಗಿ ತಿಳಿದಿರಬೇಕಾಗುತ್ತದೆ.
ಸಮಯ ಎನ್ನುವುದು ಸ್ಮರಣೀಯವಾಗಿದ್ದ ಕಾರಣ, ಮಾನವರು ತಮ್ಮ ಜೀವನದ ಹಾದಿಯಲ್ಲಿ ಮಾರ್ಗದರ್ಶನ ಅಥವಾ ಪ್ರೇರಣೆಗಾಗಿ ನಕ್ಷತ್ರಗಳ ಕಡೆಗೆ ನೋಡಲಾರಂಭಿಸಿದ್ದರು. ಪುರಾತನ ವಿಜ್ಞಾನದಲ್ಲಿ ಜ್ಯೋತಿಷ್ಯೆನ್ನುವುದು ಭೂಮಿಯಲ್ಲಿ ನಡೆಯುವ ಪ್ರತೀ ಜೀವನ, ಸೃಷ್ಟಿ ಮತ್ತು ಘಟನೆಯನ್ನು ಸಂಪರ್ಕಿಸುವ ಬ್ರಹ್ಮಾಂಡದ ಅತೀ ನಿಗೂಢ ಬೌದ್ಧಿಕ ವ್ಯವಸ್ಥೆಯಾಗಿತ್ತು. ಹೀಗಾಗಿ ಹಲವು ಮುನಿಗಳು ಮತ್ತು ಜ್ಯೋತಿಷಿಗಳು ಜ್ಯೋತಿಷ್ಯವನ್ನು ಕಾಲ ಜ್ಞಾನದ ಕಲೆ ಎಂದೇ ಕರೆದಿದ್ದಾರೆ.
ಕ್ಲಿಕ್ಆಸ್ಟ್ರೋ ಜ್ಯೋತಿಷ್ಯವನ್ನು ಎರಡೂ ಕಲೆ ಮತ್ತು ವಿಜ್ಞಾನದ ಜೊತೆಗೆ ಅರ್ಥಮಾಡಿಕೊಳ್ಳುತ್ತದೆ. ಜ್ಯೋತಿಷ್ಯದ ವೈಜ್ಞಾನಿಕ ಭಾಗವು ಅತಿ ಮುಖ್ಯವಾಗುತ್ತದೆ. ಏಕೆಂದರೆ ವ್ಯಕ್ತಿಯೊಬ್ಬರ ಜೀವನದ ಬಗ್ಗೆ ಜ್ಯೋತಿಷಿಗಳು ಹೇಳುವ ಪ್ರತೀ ಭವಿಷ್ಯವನ್ನೂ ಗಣಿತೀಯ, ಜ್ಯಾಮಿತೀಯ ಮತ್ತು ಖಗೋಳ ವಿಧಾನವನ್ನು ಬಳಸಿಕೊಂಡು ಅಂದಾಜಿಸಲಾಗುತ್ತದೆ. ಜ್ಯೋತಿಷ್ಯದ ಭವಿಷ್ಯಗಳನ್ನು ವೈಜ್ಞಾನಿಕ ವಿಧಾನಗಳು ಮತ್ತು ಕಾಲಜ್ಞಾನದ ಪರಸ್ಪರ ಅವಲಂಬನೆ ಮತ್ತು ಅವಲೋಕನವನ್ನು ಆಧರಿಸಿ ಹೇಳಲಾಗುತ್ತದೆ.
ಪುರಾತನ ಕಾಲದಲ್ಲಿ ಜ್ಯೋತಿಷಿಗಳು ಆಕಾಶವನ್ನು ಗಮನಿಸಿ, ಗ್ರಹಗಳು ಮತ್ತು ಆಕಾಶ ಕಾಯಗಳು ಬ್ರಹ್ಮಾಂಡದಲ್ಲಿ ಹೇಗೆ ತಮ್ಮ ದಾರಿಗಳನ್ನು ಅನುಸರಿಸುತ್ತವೆ ಎನ್ನುವುದನ್ನು ಅವಲೋಕಿಸುತ್ತಿದ್ದರು. ಅವರು ಅವುಗಳನ್ನುದಾಖಲಿಸಿಟ್ಟರು. ಅದನ್ನು ಆಧರಿಸಿ ವ್ಯಕ್ತಿಗತವಾಗಿ ಜನರ ಭವಿಷ್ಯ ಹೇಗೆ ತೆರೆದುಕೊಳ್ಳಲಿದೆ ಎನ್ನುವುದನ್ನು ನಿಖರವಾಗಿ ಅಂದಾಜಿಸಲು ಜ್ಯೋತಿಷ್ಯ ಎನ್ನುವ ವಿಜ್ಞಾನವನ್ನು ಸೃಷ್ಟಿಸಿದರು.
ನಿಧಾನವಾಗಿ ಆಕಾಶಕಾಯಗಳು ಕೆಲವೊಂದು ಸ್ಥಾನದಲ್ಲಿ ನಿಂತಿದ್ದಾಗ ಹವಾಮಾನದ ಬದಲಾವಣೆಗಳು ಮತ್ತು ವ್ಯಕ್ತಿಯ ಜೀವನದಲ್ಲಿ ನಡೆದ ಕೆಲವು ಘಟನೆಗಳಿಗೆ ತಳಕು ಹಾಕಿರುವುದನ್ನು ಗಮನಿಸಿದ್ದಾರೆ. ಇದನ್ನು ಸಂಕ್ಷಿಪ್ತವಾಗಿ ಹೇಳುವುದಾದಲ್ಲಿ, ಜ್ಯೋತಿಷ್ಯ ಎಂದರೆ ಬ್ರಹ್ಮಾಂಡವನ್ನು ಅರ್ಥ ಮಾಡಿಕೊಂಡಿರುವುದು ಮತ್ತು ಆ ಬಗ್ಗೆ ಇರುವ ವಿಶಾಲವಾದ ಜ್ಞಾನ. ಆ ಜ್ಞಾನದಿಂದ ಕಾಲಜ್ಞಾನ ಮತ್ತು ಪ್ರಾಕೃತಿಕ ಪರಿವರ್ತನೆಗಳಿಗೆ ತಕ್ಕಂತೆ ನಮ್ಮ ಜೀವನವನ್ನು ನಿಯಂತ್ರಿಸಲು ಸ್ವಯಂ ಜ್ಞಾನ ಮತ್ತು ಜಾಗೃತಿಯನ್ನು ಪಡೆದುಕೊಳ್ಳಬಹುದು.
ಇಂದಿನ ಜಾತಕಕ್ಕೆ, ನೀವು ಕ್ಲಿಕ್ಆಸ್ಟ್ರೋ ನಿತ್ಯದ ಜ್ಯೋತಿಷ್ಯ ಭವಿಷ್ಯವನ್ನು ನಿಮ್ಮ ರಾಶಿಚಕ್ರಕ್ಕೆ ತಕ್ಕಂತೆ ಪರಿಶೀಲಿಸಬಹುದು. 12 ರಾಶಿ ಚಕ್ರವನ್ನು ಅಗ್ನಿ, ಜಲ, ವಾಯು ಮತ್ತು ಭೂಮಿ ಮೊದಲಾಗಿ ಪಂಚ ತತ್ವಗಳಾಗಿ ಪರಸ್ಪರ ಅವುಗಳ ಸಂಬಂಧಕ್ಕೆ ತಕ್ಕಂತೆ ವಿಭಾಗಿಸಲಾಗಿದೆ. ಉದಾಹರಣೆಗೆ, ಅಗ್ನಿಯ ತತ್ವದಲ್ಲಿ ಮೇಷ, ಸಿಂಹ ಮತ್ತು ಧನು ರಾಶಿಗಳಿವೆ. ಆದರೆ ನಿರ್ದಿಷ್ಟ ರಾಶಿ ಚಕ್ರದ ಪ್ರತೀ ವ್ಯಕ್ತಿಯೂ ತಮ್ಮ ಬೆಂಕಿಯ ತಾಪವನ್ನು ವಿಶಿಷ್ಟ ರೀತಿಯಲ್ಲಿ ಪ್ರಜ್ವಲಿಸುತ್ತವೆ.
ಏಕೆ ಕ್ಲಿಕ್ಆಸ್ಟ್ರೋ?
ಕ್ಲಿಕ್ಆಸ್ಟ್ರೋದಲ್ಲಿ ನಿಮ್ಮ ನಿತ್ಯದ ಜಾತಕ ವರದಿಯು ನಿಮಗೆ ನಿಮ್ಮ ದಿನವನ್ನು ಹೇಗೆ ಯೋಜಿಸಬಹುದು ಎಂಬ ಬಗ್ಗೆ ಹೆಚ್ಚಿನ ವಿವರವನ್ನು ನೀಡಲಿದೆ. ಅದು ಆಕಾಶ ಕಾಯಗಳ ಸ್ಥಾನ ಮತ್ತು ಚಲನೆಯನ್ನು ಆಧರಿಸಿ ನಿತ್ಯ ಜೀವನದಲ್ಲಿ ಯಾವ ಅಡೆತಡೆಗಳನ್ನು ಎದುರಿಸಬಹುದು ಎಂಬುದನ್ನು ಮುಖ್ಯವಾಗಿ ತೋರಿಸುತ್ತದೆ. ಮುಂದುವರಿದು, ನಿಮ್ಮ ಇಂದಿನ ಜಾತಕದ (ಟುಡೇಸ್ ಹೋರೋಸ್ಕೋಪ್) ಇಂಗ್ಲಿಷ್ ವರದಿಯಲ್ಲಿ ನೀವು ನಿಮ್ಮ ವ್ಯಕ್ತಿತ್ವ, ವೃತ್ತಿ, ಪ್ರೇಮ ಜೀವನ, ಇತರರೊಂದಿಗೆ ಸಂಬಂಧಗಳ ಬಗ್ಗೆ ಹೆಚ್ಚಿನ ಒಳನೋಟಗಳನ್ನು ಪಡೆದುಕೊಳ್ಳಬಹುದು. ಇತರ ರಾಶಿ ಚಕ್ರದ ಚಿಹ್ನೆಗಳೊಂದಿಗೆ ನಿಮ್ಮ ಹೊಂದಾಣಿಕೆ ಹೇಗಿರುತ್ತದೆ ಎನ್ನುವುದನ್ನೂ ನೀವು ಪರಿಶೀಲಿಸಬಹುದು.